ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

ಅಕಾಡೆಮಿ ವತಿಯಿಂದ ರಾಮಯ್ಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ 2019ರ ಅಕ್ಟೋಬರ್ 24 – 26 ರಂದು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿ ಲಾಗುತ್ತಿದೆ.

ವಿವರಗಳು

ಸ್ನಾತಕೋತ್ತರ ವಿಶೇಷ ಉಪನ್ಯಾಸ ಮಾಲೆ – ಸಸ್ಯ ವಿಜ್ಞಾನ

ಅಕಾಡೆಮಿಯ ಯಲಹಂಕದಲ್ಲಿರುವ ನೂತನ ಕಛೇರಿಯಲ್ಲಿ ಮೂರು ದಿನಗಳ ವಿಶೇಷ ಉಪನ್ಯಾಸ ಮಾಲೆಯನ್ನು ಸ್ನಾತಕೋತ್ತರ ಪದವಿ ವಿದ್ಯಾರ್ಥಿ‍ಗಳಿಗಾಗಿ 2019ರ ಅಕ್ಟೋಬರ್ 23-25 ರಂದು ನಡೆಸಲಾಗುತ್ತಿದೆ.

ವಿವರಗಳು

ಗಣಿತ ವಿಜ್ಞಾನ ವಿಷಯದಲ್ಲಿ ರಾಷ್ಟ್ರೀಯ ಸಮ್ಮೇಳನ

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಧಾರವಾಡದಲ್ಲಿ 2019ರ ನವೆಂಬರ್ 7 – 8 ರಂದು ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ವಿವರಗಳು

ವಿಜ್ಞಾನ ಲೋಕ ದ್ವೈಮಾಸಿಕ ಸಂಚಿಕೆ

ವಿಜ್ಞಾನ ಲೋಕ ದ್ವೈಮಾಸಿಕ ಸಂಚಿಕೆಯನ್ನು 2007ರಿಂದ ಹೊರತರಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಜೀವವೈವಿದ್ಯತೆ, ಬಾಹ್ಯಾಕಾಶ ಕ್ಷೇತ್ರಗಳಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪರಿಣಿತರಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಈ ಸಂಚಿಕೆಯನ್ನು ಪ್ರತಿ ವರ್ಷ ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ಮಾಹೆಗಳಲ್ಲಿ ಹೊರತರಲಾಗುತ್ತಿದೆ. ಸಂಚಿಕೆಯನ್ನು ಸಾರ್ವಜನಿಕ ಗ್ರಂಥಾಲಯಗಳು, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ವಿವರಗಳು

ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ವಿಷಯಗಳ ಶ್ರೇಷ್ಠ ಕನ್ನಡ ಪುಸ್ತಕಗಳಿಗೆ ಪ್ರಶಸ್ತಿ

ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ವಿಷಯಗಳ ಪುಸ್ತಕಗಳ ಪ್ರಕಟಣೆಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಅಕಾಡೆಮಿಯು ಶ್ರೇಷ್ಠ ಪುಸ್ತಕ ಪ್ರಶಸ್ತಿಯನ್ನು ನೀಡುತ್ತಿದೆ.

ವಿವರಗಳು

ಜೀನಿಯಸ್ ಒಲಂಪಿಯಡ್ ಒಂದು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರೌಢಶಾಲಾ ಪರಿಯೋಜನಾ ಸ್ಪರ್ಧೆಯಾಗಿದೆ.

ವಿವರಗಳು

  • ಗೂಗಲ್ ವಿಜ್ಞಾನ ಜಾತ್ರೆಯು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಜಾಗತಿಕ ಆನ್ ಲೈನ್ ಸ್ಪರ್ಧೆಯಾಗಿದ್ದು, 13 ರಿಂದ 18 ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ವಿವರಗಳು

  • 107ನೇ ಭಾರತೀಯ ವಿಜ್ಞಾನ ಸಮಾವೇಶವನ್ನು 2020ರ ಜನವರಿ 3 ರಿಂದ 7 ರವರೆಗೆ ನಡೆಸಲಾಗುತ್ತಿದೆ.

ವಿವರಗಳು

ಐ.ಆರ್.ಐ.ಎಸ್. ರಾಷ್ಟ್ರೀಯ ವಿಜ್ಞಾನ ಜಾತ್ರೆಯನ್ನು ನಡೆಸುತ್ತಿದ್ದು, ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ವಿವರಗಳು

  • ಈ ವರ್ಚುಯಲ್ ಲ್ಯಾಬ್, ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ‘ಐಸಿಟಿ ಮೂಲಕ ರಾಷ್ಟ್ರೀಯ ಶಿಕ್ಷಣ ಮಿಶನ್’ ಕಾರ್ಯಕ್ರಮದಡಿಯಲಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲದೆ ಸಂಶೋಧನಾ ವಿದ್ಯಾರ್ಥಿಗಳೂ ಸಹ ವಿಜ್ಞಾನದ ಮೂಲ ಹಾಗೂ ಉನ್ನತ ತತ್ವಗಳನ್ನು ಪ್ರಯೋಗಗಳ ಮೂಲಕ ಕಲಿಯಲು ಸಹಕಾರಿಯಾಗಿದೆ. ಅಲ್ಲದೆ, ಅಂತರ್ಜಾಲ ಸಂಪನ್ಮೂಲಗಳು, ವಿಡಿಯೋ ಉಪನ್ಯಾಸಗಳ, ಅನಿಮೇಟೆಡ್ ಪ್ರದರ್ಶನಗಳು ಸ್ವಯಂ ಮೌಲ್ಯಮಾಪನ ಮತ್ತು ಇತರೆ ಕಲಿಕಾ ಸಾಧನಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದೆ.

ವಿವರಗಳು

  • ಆನ್ ಲೈನ್ ಲ್ಯಾಬ್, ಭೌತ ವಿಜ್ಞಾನ, ರಸಾಯಿನಿಕ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಲ್ಲಿ ಪ್ರಯೋಗಗಳನ್ನು ಹೊಂದಿದೆ. ಈ ಪ್ರಯೋಗಗಳನ್ನು ಅಮೃತಾ ಕ್ರಿಯೇಟ್ (ಅಮೃತಾ ಸೆಂಟರ್ ಫಾರ್ ರೀಸರ್ಚ್ ಇನ್ ಅಡ್ವಾನ್ಸ್ ಟೆಕ್ನಾಲಜಿ ಇನ್ ಎಜುಕೇಷನ್) ಅಭಿವೃದ್ಧಿ ಪಡಿಸಿದ್ದು, ಈ ಒಂದು ಶೈಕ್ಷಣಿಕ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದೆ, ಈ ಕಾರ್ಯಕ್ರಮವು ಅಮೃತಾ ವಿಶ್ವವಿದ್ಯಾನಿಲಯ ಮತ್ತು ಮುಂಬಾಯಿನ ಸಿಡಿಎಸಿ (ಸಿಡ್ಯಾಕ್)ನ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.

ವಿವರಗಳು

ಗೋ-ಲ್ಯಾಬ್ ವೈಜ್ಞಾನಿಕ ಸಮಸ್ಯೆಗಳ ಅಧ್ಯಯನಕ್ಕೆ ವರ್ಚುಯಲ್ ಪರಿಸರದಲ್ಲಿ ವ್ಯಾಪಕವಾದ ಆನ್ ಲೈನ್ ಪರಿಕರಗಳನ್ನು ಒದಗಿಸುತ್ತದೆ. ಬೋದಕರು ಆನ್ ಲೈನ್ ಪ್ರಯೋಗಾಲಯ ಮತ್ತು ಕಲಿಕಾ ತಂತ್ರಾಂಶಗಳನ್ನು ಬಳಸಿಕೊಂಡು ಕಸ್ಟಮೈಸ್ಡ್ ವರ್ಚುಯಲ್ ಪ್ರಯೋಗಾಲಯಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ, ವಿವಿಧ ಸಲಕರಣೆಗಳು ಮತ್ತು ಪ್ರಯೋಗಗಳನ್ನು ವಿಜ್ಞಾನದ ಕ್ಷೇತ್ರಗಳಾದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಖಗೋಳ ವಿಜ್ಞಾನ, ಜೀವ ವಿಜ್ಞಾನ, ಭೂಗೊಳ ಮತ್ತು ಗಣಿತ ವಿಜ್ಞಾನಗಳಲ್ಲಿ ಅನುಕರಿಸುವಲ್ಲಿ ವಿದ್ಯಾರ್ಥಿಗಳನ್ನು ಶಕ್ತಗೊಳಿಸಲು ಸಹಕಾರಿಯಾಗಲಿದೆ. ಇದಲ್ಲದೆ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಶ್ನೆಗಳನ್ನು ಮತ್ತು ಸಿದ್ಧಾಂತಗಳನ್ನು ರೂಪಿಸುವ, ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಚಾರಣಾ ಸಾಮಥ್ರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ

ವಿವರಗಳು

  • ಅಮೇರಿಕನ್ ಕೆಮಿಕಲ್ ಸೊಸೈಟಿಯು ರಸಾಯನಿಕ ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿನ ಮತ್ತು ಎಲ್ಲಾ ಪದವಿಯ ಒಟ್ಟು 157,000 ವೃತ್ತಿಪರ ಸದಸ್ಯ ವೃಂದವನ್ನು ಹೊಂದಿರುವ ಸಂಸ್ಥೆಯಾಗಿದೆ. ಇದು ಪ್ರಪಂಚದ ಬಹು ದೊಡ್ಡ ವೈಜ್ಞಾನಿಕ ಸೊಸೈಟಿಯಾಗಿದ್ದು, ಅಧಿಕೃತ ವೈಜ್ಞಾನಿಕ ಮಾಹಿತಿಯ ಪ್ರಮುಖ ಮೂಲವಾಗಿದೆ.

ವಿವರಗಳು

  • ಅಮೇರಿಕಾದ ಪಿಟ್ಸ್ಬರ್ಗನ ಕರ್ನೆಗಿ ಮೆಲ್ಲನ್ ವಿಶ್ವವಿದ್ಯಾನಿಲಯದ ಬೋಧನಾ ಸಿಬ್ಬಂದಿಗಳು ಈ ಚೆಮ್ಕೆಲೆಕ್ಟವ್‍ನ್ನು ಅಭಿವೃದ್ಧಿಪಡಿಸಿದ್ದು, ವರ್ಚುಯಲ್ ಲ್ಯಾಬ್, ಸನ್ನಿವೇಶ-ಆಧಾರಿತ ಚಟುವಟಿಕೆಗಳ ಕಲಿಕಾ ಟ್ಯುಟೋರಿಯಲ್ ಮತ್ತು ಪರಿಕಲ್ಪನಾ ಪರೀಕ್ಷೆಗಳ ಒಂದು ಸಂಗ್ರವಾಗಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಾಯನ ವಿಜ್ಞಾನದ ತತ್ವಗಳನ್ನು ಪರಿಶೀಲಿಸಬಹುದಾಗಿದೆ ಹಾಗೂ ಕಲಿಯಬಹುದಾಗಿದೆ.

ವಿವರಗಳು

ವಿಡಿಯೋ ತರಗತಿಗಳು