ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ‘ಶ್ರೇಷ್ಠ ಪುಸ್ತಕ ಪ್ರಶಸ್ತಿ’

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 5, 2021, ಸಮಯ ಸಂಜೆ 5:30ರೊಳಗೆ

ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು ಹಾಗೂ ಕನ್ನಡದಲ್ಲಿ ವಿಜ್ಞಾನದ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಹೊರಬರಲು ಅನುವು ಮಾಡಿಕೊಡುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ 2009-10ನೇ ಸಾಲಿನಿಂದ ಕನ್ನಡದಲ್ಲಿ ಪುಸ್ತಕವನ್ನು ಪ್ರಕಟಿಸಿರುವ ಲೇಖಕರನ್ನು ಗುರುತಿಸಿ ‘ಶ್ರೇಷ್ಠ ಪುಸ್ತಕ’ ರಾಜ್ಯ ಮಟ್ಟದ ಪ್ರಶಸ್ತಿ ಮತ್ತು ಸನ್ಮಾನ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯನ್ನು 2 ವರ್ಷಗಳಿಗೆ ಒಂದು ಬಾರಿ ನೀಡಲಾಗುವುದು. ಮುಂದಿನ ಪ್ರಶಸ್ತಿಗೆ ಪ್ರಕಟಣೆಯನ್ನು ಏಪ್ರಲ್ 2020ರಲ್ಲಿ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಲೇಖಕರು ನಿಗದಿತ ನಮೂನೆಯ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸುವುದು.

ಪ್ರಶಸ್ತಿ

  • ಪ್ರಶಸ್ತಿಗೆ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು.
  • ಆಯ್ಕೆಯಾದ ಲೇಖಕರಿಗೆ ಒಂದು ಸಮಾರಂಭವನ್ನು ಏರ್ಪಡಿಸಿ ಸನ್ಮಾನ ಮಾಡಲಾಗುವುದು. ಅಲ್ಲದೆ, ಆಯ್ಕೆಯಾದ ಪ್ರತೀ ಲೇಖಕರಿಗೆ ರೂ. 25 ಸಾವಿರಗಳ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಅರ್ಹತೆ

  • ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಈ ಪ್ರಶಸ್ತಿಗೆ ಸಲ್ಲಿಸಬಹುದಾಗಿದೆ.
  • ಯಾವುದೇ ತರಗತಿ, ಪದವಿ-ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ಇನ್ನಿತರ ಯಾವುದೇ ಕೋರ್ಸ್‍ಗಳ ಪಠ್ಯ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
  • ಒಂದು ವಿಷಯದಲ್ಲಿ ಒಬ್ಬ ಲೇಖಕ ಗರಿಷ್ಠ ಎರಡು ಪುಸ್ತಕಗಳನ್ನು ಮಾತ್ರ ಸಲ್ಲಿಸಬಹುದಾಗಿದೆ.
  • ಈ ಹಿಂದೆ ಅಕಾಡೆಮಿಯಿಂದ ಯಾವುದೇ ವಿಷಯದಲ್ಲಿ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ಪಡೆದ ಲೇಖಕರನ್ನು ಪರಿಗಣಿಸಲಾಗುವುದಿಲ್ಲ.
  • ಅಪರಾಧ ಹಿನ್ನೆಲೆಯಲ್ಲಿ ಆರೋಪಕ್ಕೊಳಪಟ್ಟಿರುವ/ವಿಚಾರಣೆಗೊಳಪಟ್ಟಿರುವ/ಕಾನೂನು ಕ್ರಮ ಎದುರಿಸುತ್ತಿರುವ/ಶಿಕ್ಷೆಗೊಳಪಟ್ಟಿರುವ ಅಥವಾ ಇನ್ನಿತರ ಸಮಾಜ ಬಾಹಿರ ಕ್ರಿಯೆಯಲ್ಲಿ ಪಾಲ್ಗೊಂಡಿರುವ ಲೇಖಕರು ಶ್ರೇಷ್ಠ ಲೇಖಕ ಪ್ರಶಸ್ತಿಗೆ ಅನರ್ಹರಾಗಿರುತ್ತಾರೆ.
  • ಒಂದು ವೇಳೆ ಲೇಖಕರು ಪ್ರಶಸ್ತಿಗೆ ಆಯ್ಕೆಯಾಗಿ ಅಕಾಡೆಮಿಯು ಪ್ರಕಟಿಸಿದ ನಂತರ ಲೇಖಕರು ಮೇಲ್ಕಂಡ ಅನರ್ಹತೆ ಹೊಂದಿರುವ ಬಗ್ಗೆ ತಿಳಿದುಬಂದರೆ ಅಂತವರಿಗೆ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.
  • ಈ ಪ್ರಶಸ್ತಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಲೇಖಕರು ಸಹಕರಿಸುವುದು. ಯಾವುದೇ ರೀತಿಯಾದ ಪ್ರಭಾವ/ಮಧ್ಯಸ್ತಿಕೆ ವಹಿಸುವ ಲೇಖಕರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಅನರ್ಹಗೊಳಿಸಲಾಗುವುದು.