ವಿಜಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸರ್ಟಿಫಿಕೆಟ್ ಕೋರ್ಸ್

ಉದ್ದೇಶಗಳು

  • ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ಪೂರಕವಾದ ವಿಷಯಗಳಲ್ಲಿ ಶಿಕ್ಷಕರು ತಮ್ಮ ಜ್ಞಾನಪರಿಧಿಯನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುವುದು.
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆಗಳು/ಆವಿಕ್ಷಾರಗಳ ಬಗ್ಗೆ ಅರಿವು ಮೂಡಿಸುವುದು.

ಕಾರ್ಯಕ್ರಮ

  • ಈ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಪದವಿ ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥೀಗಳಿಗಾಗಿ ನಡೆಸಲಾಗುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ

  • ಅಕಾಡೆಮಿಯು ನೋಂದನಿಗೆ ಅರ್ಜಿ ಆಹ್ವಾನಿಸಿ ಪ್ರಕಟಣೆ ನೀಡಿದಾಗ ಆನ್ ಲೈನ್ ಮೂಲಕ ನೊಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.
  • ಆಸಕ್ತರು ಅರ್ಜಿ ನಮೂನೆಯಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ನಿರ್ದಿಷ್ಟಪಡಿಸಲಾದ ದಾಖಲೆಗಳೊಂದಿಗೆ ವಿಭಾಗದ ಅಧ್ಯಕ್ಷರು/ಪ್ರಾಂಶುಪಾಲರು /ಸಂಶೋಧನಾ ಮಾರ್ಗದರ್ಶಕರ ಮೂಲಕ kstatraining@gmail.com ಇಮೇಲ್‍ಗೆ ಕಳುಹಿಸುವುದು.