ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನಗಳು

ಅಕಾಡೆಮಿಯು ರಾಜ್ಯ/ರಾಷ್ಟ್ರ ಮಟ್ಟದ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದು, ಆರ್ಥಿಕ ವರ್ಷ 2019-20ನೇ ಸಾಲಿನಲ್ಲಿ ವಿಭಾಗಕ್ಕೆ ಒಂದರಂತೆ 4 ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಎರಡು-ಮೂರು ದಿನಗಳ ಸಮ್ಮೇಳನದಲ್ಲಿ ಶ್ರೇಷ್ಠ ವಿಜಾನಿಗಳು, ತಂತ್ರಜ್ಞಾನಿಗಳು, ಉದ್ಯಮಿಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮುಂಚುಣಿ ವಿಷಯಗಳಲ್ಲಿ ಆಹ್ವಾನಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳು, ವಿಜ್ಞಾನ ಅಧ್ಯಾಪಕರು, ವಿಜ್ಞಾನ ಬರಹಗಾರರು/ ಸಂವಹನಕಾರರು, ಎನ್‍ಜಿಒ/ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇತರೆ ಆಸಕ್ತರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಉದ್ದೇಶಗಳು

  • ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು, ಅಧಿಕಾರಿಗಳು ಹಾಗೂ ಆಸಕ್ತ ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದು
  • ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವುದು
  • ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಜನಪ್ರಿಯಗೊಳಿಸುವುದು
  • ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳಸುವುದು

ಸಮ್ಮೇಳನದ ವೆಬ್ ಸೈಟ್