ಧ್ಯೇಯೋದ್ದೇಶಗಳು

  • ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಹಾಗೂ ಅವರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಸರಿಸುವುದು.
  • ನಿಯತಕಾಲಿಕೆ, ಸಂಚಿಕೆ ಮತ್ತು ವಾರ್ತಾ ಪತ್ರಗಳ ಮೂಲಕ ವಿಜ್ಞಾನ ಜ್ಞಾನ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ವಿತರಿಸುವುದು.
  • ಮೂಲ ವಿಜ್ಞಾನದ ವ್ಯಾಸಂಗಕ್ಕೆ ಶಿಷ್ಯವೇತನ ಹಾಗೂ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ಕೈಗೊಳ್ಳಲು ಉತ್ತೇಜನ.
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಮುಂಚೂಣಿ ವಿಷಯಗಳು ಮತ್ತು ಅವುಗಳಲ್ಲಿರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು
  • ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಕ್ಕೆ ಸಂಬಂಧಿಸಿದ ಸಮಾವೇಶ, ವಿಚಾರ ಸಂಕಿರಣ, ಕಾರ್ಯಾಗಾರ, ವಸ್ತುಪ್ರದರ್ಶನ, ರಸಪ್ರಶ್ನೆ, ಮೇಳ ಮುಂತಾದವುಗಳನ್ನು ಪ್ರೋತ್ಸಾಹಿಸುವುದು.
  • ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಕನ್ನಡದಲ್ಲಿ ವಿಜ್ಞಾನ ಲೇಖಕರಿಗೆ ಪ್ರಶಸ್ತಿ.
  • ವಿಜ್ಞಾನ ವಿಷಯದಲ್ಲಿ ಶಿಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಪುನಶ್ಚೇತನಾ ಶಿಬಿರ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುವುದು
  • ವಿಜ್ಞಾನ ಸಂವಾಹನವನ್ನು ಪ್ರೋತ್ಸಾಹಿಸುವುದು.