ಕಾರ್ಯಕ್ರಮಗಳು

ಅಕಾಡೆಮಿಯ ವಾರ್ಷಿಕ ಸಮ್ಮೇಳನಗಳು

ಪ್ರತಿ ವರ್ಷ ಸಮ್ಮೇಳನವನ್ನು ಪದವಿ ಕಾಲೇಜು/ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಅಕಾಡೆಮಿಯ ವತಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಆರ್ಥಿಕ ವರ್ಷ 2019-10ರಲ್ಲಿ ಒಟ್ಟು ನಾಲ್ಕು ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಜೀವ ವಿಜ್ಞಾನ, ‍ಮೈಸೂರಿನಲ್ಲಿ ರಸಾಯನಿಕ ವಿಜ್ಞಾನ, ಧಾರವಾಡದಲ್ಲಿ ಗಣಿತ ವಿಜ್ಞಾನ ಹಾಗೂ ಕಲಬುಗರಿಯಲ್ಲಿ ‍‍‍ಭೌತವಿಜ್ಞಾನ ವಿಷಯದಲ್ಲಿ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ.

ವಿವರಗಳು

ಜೀವಮಾನ ಸಾಧನೆ ಪ್ರಶಸ್ತಿ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿಯೊಬ್ಬರನ್ನು ಆಯ್ಕೆ ಮಾಡಿ ಸಮ್ಮೇಳನದ ದಿನ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ವಿವರಗಳು

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳ ಆಚರಣೆ

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ದಿನಾಚರಣೆಗಳ ಪ್ರಾಮುಖ್ಯತೆ ಮತ್ತು ಮಹತ್ವಗಳ ಬಗ್ಗೆ ಅರಿವು ಮೂಡಿಸಲು ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಆಚರಿಸಲಾಗುತ್ತಿದೆ.

ವಿವರಗಳು

ವಿಶೇಷ ಉಪನ್ಯಾಸ ಮಾಲೆ/ಕಾರ್ಯಾಗಾರ

ಮೂರು ಮತ್ತು ಎರಡು ದಿನಗಳ ವಿಶೇಷ ಉಪನ್ಯಾಸ ಮಾಲೆ/ಕಾರ್ಯಾಗಾರಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿದ್ದು, ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ವಿವರಗಳು

ವಿಜ್ಞಾನ ಮೇಳ

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಪದವಿ ಕಾಲೇಜಿನ ಸಹಯೋಗದೊಂದಿಗೆ ವಿಜ್ಞಾನ ಮೇಳ ಕಾರ್ಯಕ್ರವನ್ನು ನಡೆಸಲಾಗುತ್ತಿದೆ.

ವಿವರಗಳು

ಸುಸಜ್ಜಿತ ಪ್ರಯೋಗಾಲಯ

ವಿಜ್ಞಾನ ಮತ್ತು ತಂತ್ರಜ್ಞಾನ ಮುಂಚೂಣಿ ವಿಷಯಗಳಲ್ಲಿ ನಡೆಸಲಿರುವ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳು ಮತ್ತು ಸುಸಜ್ಜಿತ ಪ್ರಯೋಗಾಲಯವನ್ನು ಅಕಾಡೆಮಿಯ ನೂತನ ಕಟ್ಟಡದದಲ್ಲಿ ಸ್ಥಾಪಿಸಲಾಗುತ್ತಿದೆ.

ವಿವರಗಳು

ವಿಜ್ಞಾನ ಲೋಕ ಪ್ರಕಟಣೆ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳು, ಅನ್ವೇಷಣೆ ಹಾಗೂ ಪ್ರಗತಿಯ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ‘ವಿಜ್ಞಾನ ಲೋಕ’ ದ್ವೈಮಾಸಿಕ ಸಂಚಿಕೆಯನ್ನು ಹೊರತರಲಾಗುತ್ತಿದೆ. ಪದವಿ ಪೂರ್ವ ಮತ್ತು ವಿಜ್ಞಾನ ಪದವಿ ಕಾಲೇಜುಗಳು, ವಿಜ್ಞಾನ ಕೇಂದ್ರಗಳು, ಗ್ರಂಥಾಲಯಗಳು ಹಾಗೂ ಇನ್ನಿತರೆ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

ವಿವರಗಳು

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಮುಂಚುಣಿ ವಿಷಯಗಳು ಮತ್ತು ಬೆಳವಣಿಗೆಗಳ ಬಗ್ಗೆ ಗ್ರಾಮಾಂತರ/ಪಟ್ಟಣ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಈ ಸಮ್ಮೇಳನವನ್ನು ಕನ್ನಡದಲ್ಲಿ ಆಯೋಜಿಸಲಾಗುತ್ತಿದೆ.

ವಿವರಗಳು

ವಿಜ್ಞಾನ ಲೇಖಕರಿಗೆ ಪ್ರಶಸ್ತಿ

ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜಿಸುವ ಸಲುವಾಗಿ ವಿಜ್ಞಾನ, ತಂತ್ರಜ್ಞಾನ, ಕೃಷಿ ಹಾಗೂ ವೈದ್ಯಕೀಯ ವಿಷಯಗಳಲ್ಲಿ ಕನ್ನಡಲ್ಲಿ ಪ್ರಕಟಗೊಂಡಿರುವ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ವಿವರಗಳು

ವಿಶೇಷ ಚೇತನರಿಗೆ ವಿಜ್ಞಾನ ಕಾರ್ಯಕ್ರಮಗಳು

ಈ ಕಾರ್ಯಕ್ರಮವನ್ನು ವಿಶೇಷ ಚೇತನ/ದಿವ್ಯಾಂಗ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ. ಅವರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ವಿವರಗಳು

ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸರ್ಟಿಫಿಕೇಟ್ ಕೋರ್ಸ್

ಈ ಕಾರ್ಯಕ್ರಮವನ್ನು ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ.

ವಿವರಗಳು

ಪ್ರೊ. ಯು. ಆರ್. ರಾವ್ ಹೊರಾಂಗಣ ವಿಜ್ಞಾನ ಉದ್ಯಾನವನ

ನವೀನ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಕಲ್ಪನಾ ಶಕ್ತಿ ಹಾಗೂ ಕುತೂಹಲಕಾರಿ ಮನೋಭಾವನೆಯನ್ನು ಬೆಳಸಿಕೊಳ್ಳಲು ಅನುವು ಮಾಡಿಕೊಡುವ ಸೌಕರ್ಯಗಳನ್ನು ಕಲ್ಪಿಸಲಾಗುವುದು.

ವಿವರಗಳು