ವಿಶೇಷ ಉಪನ್ಯಾಸ ಮಾಲೆ/ವಿಶೇಷ ಕಾರ್ಯಾಗಾರ

ಸ್ನಾತಕೋತ್ತರ ವಿಶೇಷ ಉಪನ್ಯಾಸ ಮಾಲೆ

ಸ್ನಾತಕೋತ್ತರ ವಿಶೇಷ ಉಪನ್ಯಾಸ ಮಾಲೆ – ಸಸ್ಯ ವಿಜ್ಞಾನ

ಅಕಾಡೆಮಿಯ ಯಲಹಂಕದಲ್ಲಿರುವ ನೂತನ ಕಛೇರಿಯಲ್ಲಿ ಮೂರು ದಿನಗಳ ವಿಶೇಷ ಉಪನ್ಯಾಸ ಮಾಲೆಯನ್ನು ಸ್ನಾತಕೋತ್ತರ ಪದವಿ ವಿದ್ಯಾರ್ಥಿ‍ಗಳಿಗಾಗಿ 2019ರ ಅಕ್ಟೋಬರ್ 23-25 ರಂದು ನಡೆಸಲಾಗುತ್ತಿದೆ.

ಉದ್ದೇಶಗಳು

  • ಮೂಲ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಚಲಿತ ವೈಜ್ಞಾನಿಕ ವಿಷಯಗಳು ಹಾಗೂ ಆಧುನಿಕ ಸಂಶೋಧನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವುದು.
  • ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಾಗುತ್ತಿರುವ ಉನ್ನತ ಸಂಶೋಧನೆಗಳ ಬಗ್ಗೆ ಅರಿವು ಮೂಡಿಸುವುದು.
  • ಸ್ನಾತಕೋತ್ತರ ಪದವಿಯ ನಂತರ ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವುದು.

ಕಾರ್ಯಕ್ರಮ

ಈ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಭೂ ವಿಜ್ಞಾನ, ಕೃಷಿ, ವೈದ್ಯಕೀಯ, ತಾಂತ್ರಿಕ, ಮೀನುಗಾರಿಕೆ, ಪಶುವೈದ್ಯಕೀಯ ಮತ್ತು ಗಣಿತ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿದೆ.

ವಿಜ್ಞಾನ ಉಪನ್ಯಾಸ ಮಾಲೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ನಡೆಸಿ, ಅಂಕಗಳ ಆಧಾರದ ಮೇಲೆ ಮೊದಲನೇ, ಎರಡನೇ ಮತ್ತು ಮೂರನೇ ಬಹುಮಾನ ಅನುಕ್ರಮವಾಗಿ ನಗದು ಮೊತ್ತ ರೂ. 5000/-, ರೂ. 3000/- ಮತ್ತು 2,000/-ಗಳನ್ನು ನೀಡಲಾಗುತ್ತಿದೆ.